Tuesday, June 11, 2019

ಶಿವಮೊಗ್ಗ ರಂಗಾಯಣದಿಂದ ಹೊರಟ ರಂಗತೇರು

ಶಿವಮೊಗ್ಗ : ರಂಗಾಯಣ ರೆಪರ್ಟರಿ ವತಿಯಿಂದ ಜೂ.7ರಿಂದ ರಾಜ್ಯದ 16 ಜಿಲ್ಲೆಗಳಲ್ಲಿ ರಂಗಾಯಣದ ರಂಗತೇರಿನ ರಂಗಪಯಣ ಆರಂಭಗೊಂಡಿದೆ.
ರಂಗಾಯಣ ನಿರ್ದೇಶಕ ಡಾ.ಎಂ.ಗಣೇಶ್‌ ನೇತೃತ್ವದಲ್ಲಿ ಈ ತೇರು ಅರೆಮಲೆನಾಡು, ಉತ್ತರ ಕರ್ನಾಟಕದ ಬಯಲು ಸೀಮೆ ಮತ್ತು ಹೈದರಬಾದ್‌ ಕರ್ನಾಟಕದ ಊರುಗಳು ಸೇರಿದಂತೆ ರಾಜ್ಯದ ಒಟ್ಟು 16 ಜಿಲ್ಲೆಗಳಲ್ಲಿ ಸುಮಾರು ಸಾವಿರ ಕಿ.ಮೀ. ಸಂಚರಿಸಲಿದೆ. ರಂಗಾಯಣ ರೆಪರ್ಟರಿಯ 18 ಜನ ಕಲಾವಿದ, ತಂತ್ರಜ್ಞರು ಮತ್ತು ಒಬ್ಬರು ರಂಗಪಯಣವನ್ನು ನೋಡಿಕೊಳ್ಳುವ ಸಂಚಾಲಕರು ಇದ್ದಾರೆ
ಈ ಬಾರಿಯ ರಂಗತೇರಿನ ಪಯಣದಲ್ಲಿ ಪ್ರೊ.ಅರವಿಂದ ಮಾಲಗತ್ತಿ ಅವರ ದಲಿತ ಆತ್ಮಕಥನ ಆಧಾರಿತ ಡಾ.ಎಂ.ಗಣೇಶ ನಿರ್ದೇಶನದ 'ಗೌರ್ಮೆಂಟ್‌ ಬ್ರಾಹ್ಮಣ', ಮಣಿಪುರದ ಯುವ ನಿರ್ದೇಶಕ ಜಾಯ್‌ ಮೈಸ್ನಾಂ ಅವರು ರೈತರ ಆತ್ಮಹತ್ಯೆಗಳಿಗೆ ಸಂಬಂಧಿಸಿದಂತೆ ರಚಿಸಿ ನಿರ್ದೇಶಿಸಿದ 'ಇದಕ್ಕೆ ಕೊನೆ ಎಂದು?' ಹಾಗೂ ಹಿರಿಯ ನಿರ್ದೇಶಕರಾದ ಪಿ.ಗಂಗಾಧರ ಸ್ವಾಮಿ ಅವರು ಬಾದಲ್‌ ಸರ್ಕಾರ್‌ ಅವರ 'ಮಿಚಿಲ್‌' ನಾಟಕವನ್ನು 'ಮೆರವಣಿಗೆ' ಶೀರ್ಷಿಕೆಯಲ್ಲಿ ಕನ್ನಡಕ್ಕೆ ಭಾಷಾಂತರಿಸಿ ನಿರ್ದೇಶಿಸಿದ್ದಾರೆ.        
 ಈ ಮೂರು ನಾಟಕಗಳ ಜತೆಗೆ ಕಳೆದ ವರ್ಷದ ರಂಗಪಯಣದಲ್ಲಿ ಪ್ರದರ್ಶಿಸಿದ್ದ ಸವಿತಾರಾಣಿ ನಿರ್ದೇಶನದ ಟ್ರಾನ್ಸ್ನೇಷನ್‌ ನಾಟಕವನ್ನು ಪುನಃ ಈ ಬಾರಿ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ಒಟ್ಟು 4 ನಾಟಕಗಳನ್ನು ಪ್ರದರ್ಶನಕ್ಕೆ ಸಜ್ಜುಗೊಳಿಸಲಾಗಿದೆ.  
ಶಿವಮೊಗ್ಗ ರಂಗಾಯಣ ರೆಪರ್ಟರಿಯು ಕಳೆದ ವರ್ಷ ರಂಗಾಯಣದ ರಂಗತೇರು ಎಂಬ ವಿಶಿಷ್ಥ ರಂಗಪಯಣವನ್ನು ಆರಂಭಿಸಿತು. ಈ ರಂಗಪಯಣದಲ್ಲಿ ಆಯ್ದ ಮೂರು ನಾಟಕಗಳನ್ನು ನಾಡಿನ ಹದಿನಾರು ಜಿಲ್ಲೆಗಳಲ್ಲಿ 2,661 ಕಿ.ಮೀ. ಕ್ರಮಿಸಿ 90ಕ್ಕೂ ಹೆಚ್ಚು ಕಡೆ ಪ್ರದರ್ಶನ ನೀಡಲಾಗಿತ್ತು. ಸುಮಾರು 45 ಸಾವಿರದಿಂದ 50 ಸಾವಿರ ಜನ ನಮ್ಮ ಪ್ರದರ್ಶನ ವೀಕ್ಷಿಸಿದ್ದರು.
 ರಂಗಾಯಣದ ಆವರಣದಲ್ಲಿ ರಂಗತೇರು ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ರಂಗ ವಿಮರ್ಶಕ ಡಿ.ಎಸ್‌.ನಾಗಭೂಷಣ್‌ ಉದ್ಘಾಟಿಸಿದರು.
 ಕಲಾವಿದರು ರಂಗತಂಡಗಳ ಒಕ್ಕೂಟದ ಕೋಶಾಧ್ಯಕ್ಷ ಆರ್‌.ಎಸ್‌. ಹಾಲಸ್ವಾಮಿ ರಂಗತೇರಿನ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು. 
ಜಿಲ್ಲೆಯ ಅನೇಕ ಹಿರಿಯ ರಂಗಕರ್ಮಿಗಳು ಶುಭ ಹಾರೈಸಿದರು.
ಫೋಟೋ ಕೃಪೆ- ಇಸ್ಮಾಯಿಲ್ ಕುಟ್ಟಿ




ಶಿವಮೊಗ್ಗ ರಂಗಾಯಣದಿಂದ ಹೊರಟ ರಂಗತೇರು

ಶಿವಮೊಗ್ಗ :   ರಂಗಾಯಣ   ರೆಪರ್ಟರಿ ವತಿಯಿಂದ ಜೂ. 7 ರಿಂದ ರಾಜ್ಯದ 16 ಜಿಲ್ಲೆಗಳಲ್ಲಿ ರಂಗಾಯಣದ ರಂಗತೇರಿನ ರಂಗಪಯಣ ಆರಂಭ ಗೊಂಡಿದೆ. ರಂಗಾಯಣ ನಿರ್ದೇಶಕ ಡಾ.ಎಂ.ಗಣ...